ಕುಷ್ಟಗಿ ತಹಶೀಲ್ದಾರ್ ಕಚೇರಿಯಿಂದ ಒದಗಿಸಲಾದ ಸೇವೆಗಳಲ್ಲಿ ಗಮನಾರ್ಹ ಪ್ರಗತಿ

0
Kushtagi Tahasildar

ಕುಷ್ಟಗಿ, 11-12-2023: ಸಾರ್ವಜನಿಕರಿಗೆ ವಿವಿಧ ಸೇವೆಗಳನ್ನು ಸಕಾಲದಲ್ಲಿ ತಲುಪಿಸುವಲ್ಲಿ ಕುಷ್ಟಗಿಯ ತಹಶೀಲ್ದಾರ್ ಕಚೇರಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ತಹಶೀಲ್ದಾರ್ ಇತ್ತೀಚೆಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಷ್ಟಗಿ ತಾಲೂಕ ಕಂದಾಯ ಇಲಾಖೆ ಪ್ರಮುಖ ಸಾಧನೆಗಳು

1. ಭೂಮಿಕೇಂದ್ರದ ವಿವಿಧ ಸೇವೆಗಳು

    ಕುಷ್ಟಗಿ: Kushtagi taluka ranked 16th in Bhoomi ranking
    ಕುಷ್ಟಗಿ: Kushtagi taluka ranked 16th in Bhoomi ranking

                 ಕುಷ್ಟಗಿ ತಾಲೂಕಿನಲ್ಲಿ ಕಾವೇರಿ ತಂತ್ರಾಂಶದಿಂದ ನೊಂದಣಿಯಾಗುವ ಕ್ರಯ, ವಿಭಾಗ, ಮತ್ತು ದಾನಪತ್ರ, ಮೃತ್ಯುಪತ್ರ ಮತ್ತು ಹಕ್ಕು ಮತ್ತು ಋಣ ಹಾಗೂ ಮೋಜಿಣಿ ತಂತ್ರಾಂಶದಿಂದ ಬರುವ ತತ್ಕಾಲ ಪೋಡಿ, 11 ಇ ನಕಾಶೆ ಅಳತೆ ಪ್ರಕರಣಗಳು ಮತ್ತು ಸಾರ್ವಜನಿಕರಿಂದ ಸ್ವೀಕೃತವಾಗುವ ಪೌತಿ ವಿರಾಸತ್ ಪ್ರಕರಣಗಳು, ಮಾನ್ಯ ಸಿವಿಲ್ ನ್ಯಾಯಾಲಯದಿಂದ ಆದೇಶವಾಗಿ ಪಹಣಿ ಇಂಡೀಕರಣವಾಗುವ ಕೋರ್ಟ ಡಿಕ್ರಿ ಪ್ರಕರಣಗಳು ಮತ್ತು ಮೋಜಿಣಿ ತಿದ್ದುಪಡಿ ಹಾಗೂ ಪೈಕಿ ಪಹಣಿ ತಿದ್ದುಪಡಿ ಪ್ರಕರಣಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಿ ರಾಜ್ಯದಲ್ಲಿ ನೀಡಲಾಗುವ ಭೂಮಿ ವಿಲೇವಾರಿ ರ‍್ಯಾಂಕಿಂಗ್ ನಲ್ಲಿ ಅಗಷ್ಟ ತಿಂಗಳು ನಮ್ಮ ತಾಲೂಕಿನ ಭೂಮಿ ರ‍್ಯಾಂಕಿಂಗ್ 177 ನೇ ಸ್ಥಾನದಲ್ಲಿ ಇದ್ದು ಪ್ರಸಕ್ತ ತಿಂಗಳು 16ನೇ ಸ್ಥಾನದಲ್ಲಿದ್ದು, ಕಳೆದ 6 ತಿಂಗಳಿಂದ ಸತತವಾಗಿ ಕೊಪ್ಪಳ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿರುತ್ತದೆ.

    2. ಅಟಲ್‌ಜೀ ಜನಸ್ನೇಹಿ ಕೇಂದ್ರದ ವಿವಿಧ ಸೇವೆಗಳು

                  ಕುಷ್ಟಗಿ ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ಸಾರ್ವಜನಿಕರಿಗೆ ಒದಗಿಸಲಾಗುವ ಅಟಲ್‌ಜೀ ಜನಸ್ನೇಹಿ ಕೇಂದ್ರದ ವಿವಿಧ ಸೇವೆಗಳಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ, ವಂಶಾವಳಿ, ಬೋನಾಪೈಡ್ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಸ್ವೀಕೃತಿಯಾಗುವ ವಿಧವಾ ಮಾಶಾಸನ. ಸಂಧ್ಯಾ ಸುರಕ್ಷಾ, ಇಂದಿರಾಗಾಂಧಿ ವೃದ್ಯಾಪ್ಯ ವೇತನ ಹಾಗೂ ಅಂಗವಿಕಲ ಮಾಶಾಸನ ಮತ್ತು ರಾಷ್ಟಿçÃಯ ಭದ್ರತಾ ಯೋಜನೆ, ಮನಸ್ವಿನಿ ಹಾಗೂ ಮೈತ್ರಿ ಮಾಶಾಸನ ಹಾಗೂ ಆ್ಯಸಿಡ್ ದಾಳಿಗೆ ಒಳಗಾದ ಮಾಶಾಸನ, ರೈತ ಆತ್ಮಹತ್ಯೆ ವಿಧವಾ ವೇತನ ಹಾಗೂ ವಿವಿಧ ಭೂ ಹಿಡುವಳಿ, ಸಣ್ಣ ಹಿಡುವಳಿ ಪ್ರಮಾಣ ಪತ್ರ, ಗೇಣಿ ರಹಿತ ಪ್ರಮಾಣ ಪತ್ರ, 371 ಜೆ ಪ್ರಮಾಣ ಪತ್ರಗಳನ್ನು ನಿಗದಿತ ಅವಧಿಯೊಳಗಾಗಿ ವಿಲೇವಾರಿ ಮಾಡಿ ಜಿಲ್ಲೆಯಲ್ಲಿ ನಮ್ಮ ತಾಲೂಕು ಪ್ರಥಮ ಸ್ಥಾನದಲ್ಲಿ ಇದ್ದು, ನಾಲ್ಕು ಹೋಬಳಿಗಳು ಜಿಲ್ಲೆಯಲ್ಲಿ ವಿಲೇವಾರಿ ಪ್ರಗತಿಯಲ್ಲಿ ಮುಂಚೂಣಿಯಲ್ಲಿರುತ್ತವೆ.

    3. ಪೈಕಿ ಪಹಣಿ ತಿದ್ದುಪಡಿ ಬಾಕಿ ಪ್ರಕರಣಗಳ ಕುರಿತು

               ಮೂಲ ಆಕಾರಬಂದ ಪ್ರಕಾರ ಚಾಲ್ತಿ ಪಹಣಿ ಹೊಂದಾಣಿಕೆಯಾಗದೆ ಇರುವ ಪ್ರಕರಣಗಳಾದ ಪೈಕಿ ಪಹಣಿ ತಿದ್ದುಪಡಿ ಪ್ರಕರಣಗಳು ಒಟ್ಟು 26072 ಪ್ರಕರಣಗಳು ಇದ್ದು, ಅದರಲ್ಲಿ ಕಳೆದ 6 ತಿಂಗಳುಗಳಲ್ಲಿ ಬಾಕಿ ಇರುವ 2040 ಪ್ರಕರಣಗಳಲ್ಲಿ 1356 ಪೈಕಿ ಪಹಣಿ ತಿದ್ದುಪಡಿ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, ಬಾಕಿ 684 ಪೈಕಿ ಪಹಣಿ ತಿದ್ದುಪಡಿ ಪ್ರಕರಣಗಳು ಬಾಕಿ ಇದ್ದು, ಸದರಿ ಬಾಕಿ ಇರುವ 684 ಪಹಣಿ ತಿದ್ದುಪಡಿ ಪ್ರಕರಣಗಳ ಮೂಲ ಆಕಾರಬಂದ ದಾಖಲೆ ಪ್ರಕಾರ ಪಹಣಿ ದಾಖಲೆಗಳನ್ನು ಪರಿಶೀಲಿಸಿ ತಿದ್ದುಪಡಿಗಾಗಿ ಕಡತಗಳನ್ನು ತಯಾರಿಸುತ್ತಿದ್ದು ತಿದ್ದುಪಡಿ ಕಾರ್ಯ ಪ್ರಗತಿಯಲ್ಲಿರುತ್ತದೆ.

    4. ಮೋಜಿಣಿ ಪಹಣಿ ತಿದ್ದುಪಡಿ ಬಾಕಿ ಪ್ರಕರಣಗಳು

                         ತಾಲೂಕಿನಲ್ಲಿ ಸಾರ್ವಜನಿಕರಿಂದ ಅಳತೆಗಾಗಿ ಸ್ವೀಕೃತವಾಗುವ ಮೋಜಿಣಿ ಅರ್ಜಿಗಳು ಕಳೇದ 6 ತಿಂಗಳುಗಳಿಂದ ಒಟ್ಟು 1435 ಅರ್ಜಿಗಳು ಸ್ವೀಕೃತವಾಗಿದ್ದು, ಸದರಿ ಅರ್ಜಿಗಳ ಸ್ವೀಕೃತಿ ಆನ್‌ಲೈನ್ ಮುಖಾಂತರ ನಿರಂತರ ಪ್ರಕ್ರಿಯೆಯಾಗಿರುತ್ತದೆ. ಸದರಿ ಸ್ವೀಕೃತಿಯಾದ 1435 ತಿದ್ದುಪಡಿ ಪ್ರಕರಣಗಳಲ್ಲಿ ನಿಗದಿತ ಅವಧಿಯೊಳಗೆ 637 ಪ್ರಕರಣಗಳು ವಿಲೇವಾರಿಯಾಗಿದ್ದು, ಬಾಕಿ 798 ಪಹಣಿ ತಿದ್ದುಪಡಿ ಪ್ರಕರಣಗಳು ಪಹಣಿ ತಿದ್ದುಪಡಿಗಾಗಿ ಬಾಕಿ ಇರುತ್ತವೆ. ಬಾಕಿ ಉಳಿದ ಸದರಿ ಪ್ರಕರಣಗಳನ್ನು ತೀವ್ರಗತಿಯಲ್ಲಿ ಆದ್ಯತೆ ಮೇರೆಗೆ ವಿಲೇಗೊಳಿಸಲಾಗುವುದು

    5. ವಿವಾದಾಸ್ಪದ (ಆರ್.ಆರ್.ಟಿ) ಪ್ರಕರಣಗಳು

                ಪ್ರಸ್ತುತ ತಾಲೂಕಿನ ತಹಶೀಲ್ದಾರ ಕಾರ್ಯಾಲಯದ ನ್ಯಾಯಾಲಯದಲ್ಲಿ ಬಾಕಿ ಇರುವ ವಿವಾದಾಸ್ಪದ ಪ್ರಕರಣಗಳಲ್ಲಿ 6 ತಿಂಗಳುಗಳಿಂದ ಒಟ್ಟು 337 ಪ್ರಕರಣಗಳು ಇದ್ದು ಸದರಿ ಪ್ರಕರಣಗಳನ್ನು ಸರ್ಕಾರವು ನಿಗದಿಪಡಿಸಿರುವ ಕಾಲಮಿತಿ 90 ದಿನಗಳ ಅವಧಿಯಲ್ಲಿ ಆರ್.ಸಿ.ಸಿ.ಎಂ.ಎಸ್ ತಂತ್ರಾಂಶದ ಮೂಲಕ ಭೂಮಿ ತಂತ್ರಾಂಶಕ್ಕೆ ವಿಲೇವಾರಿ ಮಾಡಲಾಗುತ್ತಿದ್ದು, ನಿಗದಿತ 90 ದಿನಗಳಿಗಿಂತ ಮೇಲ್ಪಟ್ಟ ಯಾವುದೇ ಪ್ರಕರಣಗಳು ವಿಲೇವಾರಿಗೆ ಬಾಕಿ ಇರುವುದಿಲ್ಲ. ಪ್ರಸ್ತುತ ನ್ಯಾಯಾಲಯದಲ್ಲಿ 66 ಪ್ರಕರಣಗಳು ಬಾಕಿ ಇರುತ್ತವೆ.

    6. ಎನ್.ಪಿ.ಸಿ.ಐ  ಪ್ರಕರಣಗಳು

                   ವಿವಿಧ ಸರ್ಕಾರದಿಂದ ಸಾಮಾಜಕ ಭದ್ರತಾ ಯೋಜನೆಗಳ ಅಡಿಯಲ್ಲಿ ಪಿಂಚಣಿ ಸೌಲಭ್ಯ ಪಡಿಯುತ್ತೀರುವ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಅವರ ಆಧಾರ ಸೀಡಿಂಗ್ (ಜೋಡಣೆ) ಪ್ರಗತಿ ಕಾರ್ಯವು ನಮ್ಮ ತಾಲೂಕಿನಲ್ಲಿ ಒಟ್ಟು 53499 ಫಲಾನುಭವಿಗಳ ಆಧಾರ ಸೀಡಿಂಗ್ ನಲ್ಲಿ 53297 ಫಲಾನುಭವಿಗಳನ್ನು ನಮ್ಮ ಸಿಬ್ಬಂದಿಗಳಾದ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಮುಖಾಂತರ ಸಂಪರ್ಕಿಸಿ ಅವರು ಪಡಿಯುತ್ತೀರುವ ವಿವಿಧ ಪಿಂಚಣಿ ಸೌಲಭ್ಯಕ್ಕೆ ಆಧಾರ ಸಿಡಿಂಗ್ ಕಾರ್ಯ ಮಾಡಿಸಿದ್ದು, ಬಾಕಿ ಇರುವ 202 ಫಲಾನುಭವಿಗಳ ಆಧಾರ ಸಿಡಿಂಗ್ ಮಾಡಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ.

    7. ಎಫ್. ಐ. ಡಿ.  ಪ್ರಕರಣಗಳು

                   ಸರ್ಕಾರದ ವಿವಿಧ ಬರ ಪರಿಹಾರ ಯೋಜನೆಗಳು ನೇರವಾಗಿ ರೈತರರಿಗೆ ಸಿಗುವ ದೃಷ್ಟಿಯಿಂದ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಕಂದಾಯ ಇಲಾಖೆಗಳ ಜಂಟಿಯಾಗಿ ರೈತರ ನೊಂದಣಿ ವಿವರ(ಎಫ್.ಐ.ಡಿ)ಗಳನ್ನು ಅಪಡೆಟ್ ಮಾಡಲು ಒಟ್ಟು 1,11,465 ಪ್ಲಾಟ್‌ಗಳ ಪೈಕಿ ಈಗಾಗಲೇ 82997 ಪ್ಲಾಟ್‌ಗಳನ್ನು ಅಪಡೆಟ್ ಮಾಡಿ ಶೇಕಡಾ 75/* ರಷ್ಟು ನಮ್ಮ ತಾಲೂಕು ಪ್ರಗತಿಯನ್ನು ಸಾಧಿಸಿದ್ದು, ಬಾಕಿ ಉಳಿದ 28468 ಪ್ಲಾಟ್‌ಗಳ ಎಫ್.ಐ.ಡಿ. ಅಪಡೆಟ್ ಕಾರ್ಯ ಪ್ರಗತಿಯಲ್ಲಿರುತ್ತದೆ.

    8. ಇ- ಆಫೀಸ್ ತಂತ್ರಾಂಶದ ಮೂಲಕ ಕಾರ್ಯ   

         ಪ್ರಸ್ತುತ ಕಾರ್ಯಾಲಯದಲ್ಲಿ  ಸಾರ್ವಜನಿಕರಿಂದ ಸ್ವೀಕೃತಿಯಾಗುವ ಅರ್ಜಿಗಳನ್ನು ಭೌತಿಕವಾಗಿ ಸ್ವೀಕರಿಸಿ ಆನ್‌ಲೈನ್ ಮೂಲಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಇ-ಆಫೀಸ್ ತಂತ್ರಾoಶದ ಮೂಲಕ ಸಂಬoಧಪಟ್ಟ ವಿಷಯ ನಿರ್ವಾಹಕರು, ಶಿರಸ್ತೇದಾರರು ಹಾಗೂ ತಹಶೀಲ್ದಾರ ಲಾಗೀನ್ ಮೂಲಕ ಯಾವುದೇ ಅರ್ಜಿಯು ವಿಳಂಬವಾಗದಂತೆ ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ.

    9. ಪೈಕಿ ಪಹಣಿ ತಿದ್ದುಪಡಿ ಬಾಕಿ ಪ್ರಕರಣಗಳ ಕುರಿತು

    •  ಒಟ್ಟು 1047 ಪೈಕಿ ಪಹಣಿಗಳು ತಿದ್ದುಪಡಿಗಾಗಿ ಬಾಕಿ ಇರುತ್ತವೆ.

    •  ಇದರಲ್ಲಿ 523 ಪಹಣಿ ತಿದ್ದುಪಡಿ ಮಾಡಲು ಮೂಲ ಆಕಾರಬಂದನಂತೆ ಪಹಣಿ ಪೂಟ್ ನಂಬರ್ ಮತ್ತು ಹಿಸ್ಸಾ ತಿದ್ದುಪಡಿಗಾಗಿ ಕಡತವನ್ನು ತಯಾರಿಸಿ ಮಾನ್ಯ ಸಹಾಯಕ ಆಯುಕ್ತರು ಕೊಪ್ಪಳ ಇವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

    •  ಬಾಕಿ ಇರುವ 524 ಪ್ರಕರಣಗಳಲ್ಲಿ ಪೂಟ್ ನಂಬರ್ ತಿದ್ದುಪಡಿಯಾದ ಪ್ರಕರಣಗಳು 80 ಕಡತಗಳು ಭೂದಾಖಲೆಗಳ ಸಹಾಯಕ ನಿರ್ದೇಶಕರ ಲಾಗೀನ್‌ನಲ್ಲಿ ಅಪಡೆಟಗಾಗಿ ಬಾಕಿ ಇದ್ದು ಕೂಡಲೇ ವಿಲೇವಾರಿ ಮಾಡಲಾಗುವುದು.

    •  ಬಾಕಿ ಇರುವ 444 ಪಹಣಿ ತಿದ್ದುಪಡಿ ಪ್ರಕರಣಗಳ ಮೂಲ ಆಕಾರಬಂದ ದಾಖಲೆ ಪ್ರಕಾರ ಪಹಣಿ ದಾಖಲೆಗಳನ್ನು ಪರಿಶೀಲಿಸಿ ತಿದ್ದುಪಡಿಗಾಗಿ ಕಡತಗಳನ್ನು ತಯಾರಿಸುತ್ತಿದ್ದು ತಿದ್ದುಪಡಿ ಕಾರ್ಯ ಪ್ರಗತಿಯಲ್ಲಿರುತ್ತದೆ.

    10. ಮೋಜಿಣಿ ಪಹಣಿ ತಿದ್ದುಪಡಿ ಬಾಕಿ ಪ್ರಕರಣಗಳು

    • ಒಟ್ಟು 845 ಪ್ರಕರಣಗಳು ಪಹಣಿ ತಿದ್ದುಪಡಿಗಾಗಿ ಬಾಕಿ ಇರುತ್ತವೆ.

    • ಇದರಲ್ಲಿ 144 ಪ್ರಕರಣಗಳು ಪೂಟ್ ನಂಬರ್ ಮತ್ತು ಹಿಸ್ಸಾ ತಿದ್ದುಪಡಿಗಾಗಿ ಬಾಕಿ ಇದ್ದು 45 ಪ್ರಕರಣಗಳನ್ನು ಮೂಲ ಆಕಾರಬಂದನಂತೆ ಪಹಣಿ ಪೂಟ್ ನಂಬರ್ ಮತ್ತು ಹಿಸ್ಸಾ ತಿದ್ದುಪಡಿಗಾಗಿ ಕಡತವನ್ನು ತಯಾರಿಸಿ ಮಾನ್ಯ ಸಹಾಯಕ ಆಯುಕ್ತರು ಕೊಪ್ಪಳ ಇವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಾಕಿ ಉಳಿದ 99 ಪ್ರಕರಣಗ¼ಳು ಪ್ರಸ್ತಾವನೆ ತಯಾರಿಸಲು ಪ್ರಗತಿಯಲ್ಲಿರುತ್ತವೆ.

    • 47 ಪ್ರಕರಣಗಳು ಮೂಲ ಆಕಾರಬಂದ ಒಟ್ಟು ಕ್ಷೇತ್ರಕ್ಕೂ ಹಾಗೂ ಚಾಲ್ತಿ ಪಹಣಿ ಒಟ್ಟು ಕ್ಷೇತ್ರಕ್ಕೂ ಹೊಂದಾಣಿಕೆ ಇದ್ದು ಹಿಸ್ಸಾವಾರು ಕ್ಷೇತ್ರಕ್ಕೆ ವ್ಯತ್ಯಾಸ ಇರುತ್ತವೆ, ಅಂತಹ ಪ್ರಕರಣಗಳನ್ನು ಗುರುತಿಸಿ ಭೂದಾಖಲೆಗಳ ಸಹಾಯಕ ನಿರ್ದೇಶಕರ ಮೂಖಾಂತರ ಮಾನ್ಯ ಉಪನಿರ್ದೇಶಕರು ಭೂದಾಖಲೆಗಳು ಕೊಪ್ಪಳ ಇವರಿಗೆ ಪ್ರಸ್ತಾವನೆ ಸಲ್ಲಿಸಲು ಬಾಕಿ ಇರುತ್ತವೆ.

    • 654 ಪ್ರಕರಣಗಳು ಮೂಲ ಆಕಾರಬಂದ ಮತ್ತು ಪಹಣಿ ಕ್ಷೇತ್ರಕ್ಕೆ ವ್ಯತ್ಯಾಸ ಇದ್ದು, ಅದರಲ್ಲಿ ಮೂಲ ಆಕಾರಬಂದ ಪ್ರಕಾರ ಚಾಲ್ತಿ ಪಹಣಿ (ಅ). ಮತ್ತು (ಬ) ಹಾಗೂ (ಸಿ) ಖರಾಬು ಕ್ಷೇತ್ರ ವ್ಯತ್ಯಾಸ ಇರುವ ಪ್ರಕರಣಗಳು, ಮೂಲ ಆಕಾರಬಂದ ಕ್ಷೇತ್ರಕ್ಕೆ ಚಾಲ್ತಿ ಪಹಣಿ ಒಟ್ಟು ಕ್ಷೇತ್ರ ವ್ಯತ್ಯಾಸ ಇರುವ ಪ್ರಕರಣಗಳು, ಕೈಬಿಟ್ಟ ಪಹಣಿ ತಿದ್ದುಪಡಿ ಪ್ರಕರಣಗಳು ಹಾಗೂ ಹೆಚ್ಚುವರಿ ಪಹಣಿ ತಿದ್ದುಪಡಿ ಪ್ರಕರಣಗಳು ಹಾಗೂ ಸ.ನಂ ಅದಲು-ಬದಲು ಪ್ರಕರಣಗಳು ತಿದ್ದುಪಡಿಗಾಗಿ ಬಾಕಿ ಇರುತ್ತವೆ.

    • ಬಾಕಿ ಉಳಿದ ಪ್ರಕರಣಗಳಲ್ಲಿ ಮೂಲ ಆಕಾರಬಂದ ಪ್ರಕಾರ ಪಹಣಿ ತಿದ್ದುಪಡಿ ಮಾಡಲು ಕೈಬರಹ ಪಹಣಿ ಮತ್ತು ಮ್ಯುಟೇಷನ್ ದಾಖಲೆಗಳು ಲಭ್ಯವಿರದ ಕಾರಣ ಹಾಗೂ ಕೆಲವೊಂದು ಪ್ರಕರಣಗಳಲ್ಲಿ ಪಹಣಿ ತಿದ್ದುಪಡಿ ಮಾಡಲು ಸಾಧ್ಯವಾಗದ ಕಾರಣ ಸ್ಥಾನಿಕ ವಿಚಾರಣೆ, ಸರ್ವೇ ಇಲಾಖೆ ವರದಿ ಹಾಗೂ ಕ್ಷೇತ್ರ ಹೆಚ್ಚು ಕಡಿಮೆಯಾಗುವ ರೈತರ ಒಪ್ಪಿಗೆ ಪತ್ರ ಬೇಕಾಗಿರುವ ಕಾರಣ ವಲೇಗೊಳಿಸುವಲ್ಲಿ ವಿಳಂಬವಾಗಿರುತ್ತದೆ.

    • ಸದರಿ ಪ್ರಕರಣಗಳನ್ನು ತಿವ್ರಗತಿಯಲ್ಲಿ ಆದ್ಯತೆ ಮೇರೆಗೆ ವಿಲೇಗೊಳಿಸಲಾಗುವುದು ಎಂದು ಮಾನ್ಯರಲ್ಲಿ ಈ ಮೂಲಕ ವಿನಂತಿಸಲಾಗಿದೆ.

    You may like this: A Tough Road Ahead for Revanth Reddy as Telangana’s New Chief Minister

    11. ಪಹಣಿ ಕಾಲಂ ನಂ (3) ಮತ್ತು (9) ಬಾಕಿ ಪ್ರಕರಣಗಳು

    • ಪ್ರಸ್ತುತ ಕಾರ್ಯಾಲಯದಲ್ಲಿ 7 ಪ್ರಕರಣಗಳು ಬಾಕಿ ಇರುತ್ತದೆ.

    • ಇದರಲ್ಲಿ 5 ಪ್ರಕರಣಗಳನ್ನು ಮಾನ್ಯ ಸಹಾಯಕ ಆಯುಕ್ತರು ಕೊಪ್ಪಳ ಇವರಲ್ಲಿ ತಿದ್ದುಪಡಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.

    • 2 ಪ್ರಕರಣಗಳು ಪ್ರಸ್ತವಾನೆಗಾಗಿ ಬಾಕಿ ಇದ್ದು ಅದರಲ್ಲಿ 1 ಪ್ರಕರಣವು ಪ್ರಸ್ತಾವನೆ ತಯಾರಿಸಿ ಮಾನ್ಯ ಸಹಾಯಕ ಆಯುಕ್ತರು ಕೊಪ್ಪಳ ಇವರಿಗೆ ಕಳುಹಿಸಲು ಬಾಕಿ ಇರುತ್ತದೆ. ಮತ್ತು 1 ಪ್ರಕರಣ ಮೂಲ ಆಕಾರಬಂದ ಮತ್ತು ಪಹಣಿ ಕ್ಷೇತ್ರಕ್ಕೆ ಹೊಂದಾಣಿಕೆ ಮಾಡಲು 4-00ಎಗು ವ್ಯತ್ಯಾಸವಿದ್ದು ಮೂಲ ಕೈಬರಹ ಪಹಣಿ ದಾಖಲೆ ಲಭ್ಯವಿರುವುದಿಲ್ಲ ಕಾರಣ ಆದಷ್ಟು ತಿವ್ರಗತಿಯಲ್ಲಿ ಸದರಿ ಪ್ರರಣಗಳನ್ನು ವಿಲೇ ಮಾಡಲಾಗುವುದು.

    ಭವಿಷ್ಯದ ಯೋಜನೆಗಳು:

    ಕಚೇರಿ ತನ್ನ ಸೇವೆಗಳನ್ನು ಮತ್ತಷ್ಟು ಸುಧಾರಿಸಲು ಮತ್ತು ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಆದಷ್ಟು ಬೇಗ ಪರಿಹರಿಸಲು ಬದ್ಧವಾಗಿದೆ. ಅವರು ತಮ್ಮ ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸಲು ಹೊಸ ಉಪಕ್ರಮಗಳನ್ನು ಜಾರಿಗೆ ತರಲು ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ, ಕುಷ್ಟಗಿಯ ತಹಶೀಲ್ದಾರ್ ಕಚೇರಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುವಲ್ಲಿ ಶ್ಲಾಘನೀಯ ಪ್ರಗತಿಯನ್ನು ಪ್ರದರ್ಶಿಸಿದೆ. ಸಮಯೋಚಿತ ಮತ್ತು ಪರಿಣಾಮಕಾರಿ ಸೇವಾ ವಿತರಣೆಗೆ ಅವರ ಬದ್ಧತೆ ಶ್ಲಾಘನೀಯ.

    LEAVE A REPLY

    Please enter your comment!
    Please enter your name here