ಯಲಬುರ್ಗಾ ತಾಲೂಕು ಕಂದಾಯ ಇಲಾಖೆಯಲ್ಲಿ ಸುಧಾರಣೆಯ ಪರ್ವ

0
ಯಲಬುರ್ಗಾ ತಾಲೂಕು ಕಂದಾಯ ಇಲಾಖೆಯಲ್ಲಿ ಸುಧಾರಣೆಯ ಪರ್ವ

ಯಲಬುರ್ಗಾ, ಡಿಸೆಂಬರ್ 13,2023: ಕಂದಾಯ ಆಡಳಿತದಲ್ಲಿನ ದೀರ್ಘಕಾಲದ ಸವಾಲುಗಳಿಗೆ ಪ್ರತಿಕ್ರಿಯೆಯಾಗಿ, ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕು ಇತ್ತೀಚೆಗೆ ಹೊಸ ಸರ್ಕಾರ ಮತ್ತು ಗೌರವಾನ್ವಿತ ಕಂದಾಯ ಸಚಿವರ ನೇತೃತ್ವದಲ್ಲಿ ಅನೇಕ ಸುಧಾರಣೆಗಳಿಗೆ ಸಾಕ್ಷಿಯಾಗಿದೆ. ನೂತನ ಸರ್ಕಾರ ರಚನೆಯಾದ ನಂತರ ಕಂದಾಯ ಇಲಾಖೆಯಲ್ಲಿ ಮಾನ್ಯ ಕಂದಾಯ ಸಚಿವರ ಮಾರ್ಗದರ್ಶನದಲ್ಲಿ ವಿವಿಧ ರೀತಿಯ ಕಂದಾಯ ವಿಷಯಗಳಲ್ಲಿ ಪ್ರಗತಿಯನ್ನು ಸಾಧಿಸಿದ್ದು, ಈ ಕುರಿತು ಯಲಬುರ್ಗಾ ತಾಲೂಕು ತಹಸೀಲ್ದಾರರು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಮ್ಯುಟೇಶನ್ಸ್

ಭೂಮಿ ತಂತ್ರಾಂಶದಲ್ಲಿ ಈ ಮೊದಲು ಜಿಲ್ಲೆಗಳವಾರು ಶೇಕಡವಾರು ಪ್ರಗತಿಯನ್ನು ಪರಿಗಣನೆ ಮಾಡಲಾಗುತ್ತಿತ್ತು. ಈಗ ಭೂಮಿ ತಂತ್ರಾಂಶದಲ್ಲಿ ತಾಲೂಕವಾರು ಶ್ರೇಯಾಂಕ ವ್ಯವಸ್ಥೆ ಮೂಲಕ ಪ್ರಗತಿ ಕುರಿತು ಪ್ರತಿ ಸಭೆ ಮೂಲಕ ಚರ್ಚಿಸಲಾಗುತ್ತಿದೆ ವಿವರಣೆ ಈ ಕೆಳಗಿನಂತಿದೆ.

ನಿರ್ವಿವಾದ ಮ್ಯುಟೇಶನ್ಸ್ (15 ದಿನಗಳ ಸೂಚನೆಯೊಂದಿಗೆ) ಪ್ರಕರಣಗಳನ್ನು 16 ರಿಂದ 15 ದಿನದೊಳಗೆ ಇತ್ಯರ್ಥಪಡಿಸಲಾಗುತ್ತಿದೆ. & ನಿರ್ವಿವಾದ ಮ್ಯುಟೇಶನ್ಸ್ (7 ದಿನಗಳ ಸೂಚನೆಯೊಂದಿಗೆ) ಪ್ರಕರಣಗಳನ್ನು 8 ರಿಂದ 7 ದಿನದೊಳಗೆ ಹಾಗೂ ನಿರ್ವಿವಾದ ಮ್ಯುಟೇಶನ್ಸ್ (ಸೂಚನೆ ಇಲ್ಲದೆ ಸರಾಸರಿ ದಿನಗಳು) 0.50 ರಿಂದ 0.46 ದಿನಗಳೊಳಗೆ ಇತ್ಯರ್ಥಪಡಿಸುತ್ತಿದೆ. ಹೀಗಾಗಿ (3) ತಿಂಗಳ ಹಿಂದೆ 122 ಇದ್ದ ತಾಲೂಕವಾರು ಶ್ರೇಯಾಂಕ ಸದ್ಯ 70 ರಿಂದ 45 ಕ್ಕೂ ಬಂದಿರುತ್ತದೆ.

ಕಂದಾಯ ನ್ಯಾಯಾಲಯದ ಬಾಕಿ ಪ್ರಕರಣ

 RCCMS ತಂತ್ರಾಂಶದ ಮೂಲಕ ನಿರ್ವಹಣೆ ಮಾಡುತ್ತಿದ್ದು ಯಲಬುರ್ಗಾ ತಾಲೂಕಿನ ಕಂದಾಯ ಪ್ರಕರಣಗಳನ್ನು 55 ರಿಂದ 64 ದಿನಗಳೊಳಗಾಗಿ ಇತ್ಯರ್ಥಪಡಿಸಲಾಗುತ್ತಿದೆ. ದಿನಾಂಕ: 01/06/2023 ರಿಂದ ಇಲ್ಲಿಯವರೆಗೂ ಒಟ್ಟು 129 ಪ್ರಕರಣಗಳನ್ನು Age  ವಾರು ಇತ್ಯರ್ಥಪಡಿಸಲಾಗಿದ್ದು. (6) ಮತ್ತು (1) ವರ್ಷದ ಮೇಲ್ಪಟ್ಟ ಪ್ರಕರಣಗಳು ಯಾವು ಬಾಕಿ ಇರುವುದಿಲ್ಲ.

ಯಲಬುರ್ಗಾ ತಾಲ್ಲೂಕು: ಸರ್ಕಾರಿ ಭೂಮಿ ಗುರುತಿಸುವಿಕೆ

ಭೂಮಿ ತಂತ್ರಾಂಶದಲ್ಲಿ ಸದ್ಯ ಗ್ರಾಮವಾರು ಸರಕಾರಿ ಜಮೀನನ್ನು ಗ್ರಾಮ ಆಡಳಿತಾಧಿಕಾರಿಗಳಿಂದ ಹಾಗೂ ಕಛೇರಿಯಲ್ಲಿ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಮಾಹಿತಿಯನ್ನು ಕ್ರೂಢೀಕರಿಸಿಕೊಂಡು  ಈ ಕೆಳಗಿನಂತೆ  ಪ್ರಗತಿ ಸಾಧಿಸಲಾಗಿರುತ್ತದೆ.

Govt Land Flag

Sl NoOwners Marked After 17/09/2023Owners Marked Before17/09/2023Total Govt Owners Marked
115718592016
ಸರ್ಕಾರಿ ಭೂಮಿ ಗುರುತಿಸುವಿಕೆ

PTCL & Non PTCL (Gen) Flag

Sl NoOwners Marked After 17/09/2023Owners Marked Before17/09/2023Total Govt Owners MarkedNon PTCL (Gen) Owners Marked Before 17/09/2023Non PTCL (Gen) Owners Marked After 17/09/2023Total owner Non PTCL (Gen) Owners Marked Flag
14913118006161
ಯಲಬುರ್ಗಾ ತಾಲ್ಲೂಕು: ಸರ್ಕಾರಿ ಭೂಮಿ ಗುರುತಿಸುವಿಕೆ

ಇ-ಕಚೇರಿ ಅನುಷ್ಠಾನ

ಇ-ಕಚೇರಿ ಅನುಷ್ಠಾನ

ಯಲಬುರ್ಗಾ ತಾಲೂಕಿನಲ್ಲಿ ದಿನಾಂಕ:- 12/09/2023 ದಿಂದ ಅನುಷ್ಟಾನಗೊಳಿಸಲಾಗಿದ್ದು ಇಲ್ಲಿಯವರೆಗೂ ಇ-ಆಫೀಸ್ ಮೂಲಕ ಕಡತಗಳ ವಿಲೇವಾರಿಗೊಳಿಸಿದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ಇ –ಆಪೀಸ್ ನಲ್ಲಿ ಸಂಕಲನಗಳವಾರು ಸ್ವೀಕರಿಸಿದ ಮತ್ತು ವಿಲೇ ಹಾಗೂ ಪಾರ್ಕಿಂಗ್ ಕಡತಗಳ ವಿವರ.

ಕ್ರ,ಸಂಪೈಲ್ ಕ್ರಿಯೇಟೆಡ್       ವಿಲೇ      ಬಾಕಿ     ಷರಾ
  1  275  143  11319 ವ್ಯತ್ಯಾಸದ ಕಡತಗಳು ಪಾರ್ಕಿಂ ಗ್ ಡೇಟ್ ಅಪಡೇಟ್ ಗಾಗಿ ಬಾಕಿ ಇರುತ್ತವೆ.
ಇ –ಆಪೀಸ್ನ ಕಡತಗಳ ವಿವರ.

ಪೈಕಿ RTC

ಭೂಮಿ ತಂತ್ರಾಂಶದಲ್ಲಿ ಸದ್ಯ ಯಲಬುರ್ಗಾ ತಾಲೂಕಿನಲ್ಲಿ ಒಟ್ಟು (1638 ) ಬಾಕಿ ಇದ್ದು ಹಿಂದಿನ (6) ತಿಂಗಳಿನಿಂದ ಇಲ್ಲಿಯವರೆಗೂ ಒಟ್ಟು 2900 ರಿಂದ 3000 ರವರೆಗೂ ಪ್ರಗತಿ ಸಾಧಿಸಿದ್ದು ಬಾಕಿ ಉಳಿದ ಪ್ರಕರಣಗಳನ್ನು ಕೂಡಾ ವಿಲೇಗೊಳಿಸಲಾಗುವುದು.

ಕ್ರ ಸಂಹೋಬಳಿಬಾಕಿ ಪೈಕಿ ಪಹಣಿಷರಾ
1ಯಲಬುರ್ಗಾ898ಡಬಲ್ ನಂಬರ್, ಪೂಟ್ ನಂಬರ, ಜಂಪ್ ನಂಬರ್
2ಹಿರೇವಂಕಲಕುಂಟ740ಡಬಲ್ ನಂಬರ್, ಪೂಟ್ ನಂಬರ, ಜಂಪ್ ನಂಬರ್
ಪೈಕಿ RTC ವಿವರ

Mismatch resolution (3 and 9)

 ಭೂಮಿ ತಂತ್ರಾಂಶದಲ್ಲಿ ಸದ್ಯ ಯಲಬುರ್ಗಾ ತಾಲೂಕಿನಲ್ಲಿ ಒಟ್ಟು (4) ಬಾಕಿ ಇದ್ದು ಹಿಂದಿನ (15 ರಿಂದ 20) ಪ್ರಗತಿ ಸಾದಿಸಿದ್ದು ಬಾಕಿ ಉಳಿದ ಪ್ರಕರಣಗಳನ್ನು ಕೂಡಾ ವಿಲೇಗೊಳಿಸಲಾಗುವುದು.

1] ಕರಮುಡಿ ಸ,ನಂ 676/2 (ಪ್ರಸ್ತಾವನೆ ತಯಾರಿಸಲು ಬಾಕಿ)

2] ತೊಂಡಿಹಾಳ 437/*/* (ವಿಚಾರಣೆ ಹಂತದಲ್ಲಿ ಬಾಕಿ)

3] ಬೇವೂರು 34/1 (ಸರಕಾರಿ ಮಂಜೂರಾದ ಜಮೀನಾಗಿದ್ದು ಸರ್ವೆ ಇಲಾಖೆಗೆ ಕಳುಹಿಸಿದೆ.

4] ವಜ್ರಬಂಡಿ 55/2/2 (ಪಹಣಿ ಡಿಲಿಟ್ ಮಾಡುವುದಿದ್ದು ಪ್ರಸ್ತಾವನೆ ತಯಾರಿಸಲು ಬಾಕಿ)

ವಿಶೇಷ ತಿದ್ದುಪಡಿ ಗ್ರಾಮಗಳು

ಯಲಬುರ್ಗಾ ತಾಲ್ಲೂಕಿನಲ್ಲಿ ಒಟ್ಟು 14 ಗ್ರಾಮಗಳು  ವಿವಿದ ತರಹದ ಪಹಣಿ ತಿದ್ದುಪಡಿ ಪ್ರಕರಣಗಳು ಇರುತ್ತವೆ. ಅವುಗಳಲ್ಲಿ ಕರಮುಡಿ, ಮುಧೋಳ, ಕಾತ್ರಾಳ, ತುಮ್ಮರಗುದ್ದಿ ಶಿರಗುಂಪಿ, ತಲ್ಲೂರ, ಸಂಗನಾಳ, ಕಲ್ಲೂರ, ಯಲಬುರ್ಗಾ, ತೊಂಡಿಹಾಳ, ಹಿರೇವಡ್ರಕಲ್ಲ, ,ವೀರಾಪುರ(ಜಿ), ಗುನ್ನಾಳ,  ಹನುಮಾಪೂರ, ಪುಟಗಮರಿ, ತರಲಕಟ್ಟಿ .ಗ್ರಾಮಗಳಲ್ಲಿ ಸ.ನಂ ಅದಲು ಬದಲಿ ಡಬಲ್ ಸರ್ವೇ ನಂಬರುಗಳು, ಜಂಪ್ ನಂಬರು,  ಪೂಟ್ ನಂಬರುಗಳ ತಿದ್ದುಪಡಿ ಇತ್ಯಾದಿ, ಸಮಸ್ಯೆಗಳಿರುತ್ತವೆ.

       ಸದರಿ ಗ್ರಾಮಗಳಲ್ಲಿ ಆದ್ಯತೆ ಮೇರೆಗೆ ಸಮಸ್ಯೆಗಳನ್ನು ಪರಿಹರಿಸಲು ಸರ್ವೇ ಇಲಾಖೆ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು (4) ತಂಡಗಳನ್ನು ನಿಯೋಜಿಸಿ ಪರಿಹರಿಸಲು ಕ್ರಮವಹಿಸಲಾಗಿದೆ. ಇವುಗಳ ಪೈಕಿ 10 ಗ್ರಾಮಗಳು ಪೂರ್ಣಗೊಂಡಿರುತ್ತವೆ. ಯಲಬುರ್ಗಾ, ಮುಧೋಳ, ವೀರಾಪೂರ (ಜಿ) ಕಲ್ಲೂರ, ಗ್ರಾಮಗಳಲ್ಲಿ ಮಾತ್ರ  ಸರ್ವೇ ಕಾರ್ಯ ಪ್ರಗತಿಯಲ್ಲಿರುತ್ತದೆ.

ಕಂದಾಯ ಗ್ರಾಮ ರಚನೆಯ ಪ್ರಗತಿ

ಯಲಬುರ್ಗಾ ತಾಲೂಕಿನ ಒಟ್ಟು (7) ಕಂದಾಯ ಗ್ರಾಮಗಳ ರಚನೆಗೆ ಪ್ರಸ್ತಾವನೆ ಸಲ್ಲಿಸಲಾಗಿ ಗೆದಗೇರಿ ಗ್ರಾಮದ ಆನಂದಪುರ ಎಂಬ ಹೊಸ ಗ್ರಾಮ ರಚನೆ ಸಂಬಂಧ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಸರ್ಕಾರದ ಹಂತದಲ್ಲಿ ಬಾಕಿ ಇರುತ್ತದೆ.

ಉಳಿದಂತೆ ಸದರಿ (6) ಗ್ರಾಮಗಳು ಹಕ್ಕು ಪತ್ರ ನೀಡಲು ಬಾಕಿ ಇವೆ.

1] ಚಿಕ್ಕೊಪ್ಪ  (ಸೇವಾಲಾಲನಗರ)                       

2] ಚಿಕ್ಕಬನ್ನಿಗೋಳ  (ಕಲ್ಯಾಣನಗರ)

3] ಚಿಕ್ಕಮ್ಯಾಗೇರಿ  (ವೆಂಕಟೇಶನಗರ)

4] ಬಳೂಟಗಿ  (ಭಾಗ್ಯನಗರ)

5] ಮುರಡಿ  (ನಾರಾಯಣಪುರ)

6] ತಲ್ಲೂರು (ಶಿವಪುರ) 

ಇದನ್ನು ಓದಿ: ಕುಷ್ಟಗಿ ತಹಶೀಲ್ದಾರ್ ಕಚೇರಿಯಿಂದ ಒದಗಿಸಲಾದ ಸೇವೆಗಳಲ್ಲಿ ಗಮನಾರ್ಹ ಪ್ರಗತಿ

 ಭವಿಷ್ಯದ ಯೋಜನೆಗಳು

ಕಚೇರಿ ತನ್ನ ಸೇವೆಗಳನ್ನು ಮತ್ತಷ್ಟು ಸುಧಾರಿಸಲು ಮತ್ತು ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಆದಷ್ಟು ಬೇಗ ಪರಿಹರಿಸಲು ಬದ್ಧವಾಗಿದೆ. ಅವರು ತಮ್ಮ ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಹೆಚ್ಚಿಸಲು ಹೊಸ ಉಪಕ್ರಮಗಳನ್ನು ಜಾರಿಗೆ ತರಲು ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ, ಯಲಬುರ್ಗಾ ತಹಶೀಲ್ದಾರ್ ಕಚೇರಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುವಲ್ಲಿ ಶ್ಲಾಘನೀಯ ಪ್ರಗತಿಯನ್ನು ಪ್ರದರ್ಶಿಸಿದೆ. ಸಮಯೋಚಿತ ಮತ್ತು ಪರಿಣಾಮಕಾರಿ ಸೇವಾ ವಿತರಣೆಗೆ ಅವರ ಬದ್ಧತೆ ಶ್ಲಾಘನೀಯ.

LEAVE A REPLY

Please enter your comment!
Please enter your name here