29.7 C
Bengaluru
Friday, February 21, 2025

ಕೇವಲ 5000 ರೂ ಹೂಡಿಕೆ ಮಾಡಿದ್ರೆ ಸಿಗಲಿದೆ ಬರೋಬ್ಬರಿ 50 ರಿಂದ 75 ಲಕ್ಷ ರೂ, ಇಲ್ಲಿದೆ ಮಾಹಿತಿ

ಹೌದು, ಕೇವಲ 5000 ರೂ. ಹೂಡಿಕೆ ಮಾಡಿ ನೀವು ಬರೋಬ್ಬರಿ 50 ರಿಂದ 75 ಲಕ್ಷ ರೂಪಾಯಿ ಗಳಿಸಬಹುದು. ಹೇಗೆ ಅಂತೀರಾ ಇಲ್ಲಿದೆ ಸಂಪೂರ್ಣ ಮಾಹಿತಿ.

ಪ್ರತಿ ತಿಂಗಳು 5000 ರೂಪಾಯಿಯಂತೆ ಮ್ಯೂಚುಯಲ್ ಫಂಡ್ಸ್ ನಲ್ಲಿ ಹೂಡಿಕೆ ಮಾಡಿದರೆ ನೀವು 20 ವರ್ಷಗಳಲ್ಲಿ 50 ರಿಂದ 75 ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಈ ಒಂದು ಪೋಸ್ಟ್ ನಲ್ಲಿ ಇದರ ಬಗ್ಗೆ ಸಂಪೂರ್ಣವಾಗಿ ಚರ್ಚಿಸೋಣ. ಈ ತರಹದ ವಿವಿಧ ಉಪಯುಕ್ತ ಮಾಹಿತಿಗಾಗಿ ನಮ್ಮ ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಿ ಮತ್ತೆ ಫೇಸ್ಬುಕ್ ಪೇಜ್ ಲೈಕ್ ಮಾಡಿ.

ಮ್ಯೂಚುಯಲ್ ಫಂಡ್ಸ್’ ಏನು, ಎತ್ತ?

ಮ್ಯೂಚುವಲ್ ಫಂಡ್‌ ಗಳು ಹೂಡಿಕೆದಾರರ ಹಣವನ್ನು ಒಟ್ಟುಗೂಡಿಸುವ ಮತ್ತು ಸ್ಟಾಕ್ ಗಳು, ಬಾಂಡ್ ಗಳು, ಸರ್ಕಾರಿ ಸೆಕ್ಯುರಿಟಿಗಳು, ಚಿನ್ನ ಮುಂತಾದ ವಿವಿಧ ರೀತಿಯ ಹಣಕಾಸು ಸಾಧನಗಳಲ್ಲಿ ಹೂಡಿಕೆ ಮಾಡುವ ಒಂದು ರೀತಿಯ ಯೋಜನೆಗಳಾಗಿವೆ.

ಮ್ಯೂಚುಯಲ್ ಫಂಡ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲೇಖನಗಳನ್ನು ಓದಿ

ಇದನ್ನು ಓದಿ:
1. ಮ್ಯೂಚುವಲ್ ಫಂಡ್‌ಗಳು: ಒಂದು ಸಮಗ್ರ ಮಾರ್ಗದರ್ಶಿ (Complete Free Guide 2024)
2. ಮ್ಯೂಚುವಲ್ ಫಂಡ್ ಪದಗಳು: ಹೂಡಿಕೆ ಮಾಡುವ ಮೊದಲು ನೀವು ತಿಳಿದಿರಬೇಕಾದ 11 ಪದಗಳು

ಸೆಬಿ(SEBI) ಒಂದು ಭಾರತ ಸರ್ಕಾರದಿಂದ ರೂಪಿಸಲ್ಪಟ್ಟ ಸಂಸ್ಥೆಯಾಗಿದೆ. ಮ್ಯೂಚುವಲ್ ಫಂಡ್‌ಗಳಿಗೆ ಸಂಬಂಧಿಸಿದಂತೆ, ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸಲು SEBI ನೀತಿಗಳನ್ನು ರೂಪಿಸುತ್ತದೆ ಮತ್ತು ಮ್ಯೂಚುಯಲ್ ಫಂಡ್‌ಗಳನ್ನು ನಿಯಂತ್ರಿಸುತ್ತದೆ.

ಮ್ಯೂಚುಯಲ್ ಫಂಡ್ ವಿಧಗಳು

ಮ್ಯೂಚುಯಲ್ ಫಂಡ್ ವಿಧಗಳು
ಮ್ಯೂಚುಯಲ್ ಫಂಡ್ ವಿಧಗಳು

ಮ್ಯೂಚುಯಲ್ ಫಂಡ್ ಪದಗಳು

ಮ್ಯೂಚುಯಲ್ ಫಂಡ್ ಪದಗಳು

5000 ರೂ ಹೂಡಿಕೆ ಮಾಡಿ 50 ರಿಂದ 75 ಲಕ್ಷ ರೂಪಾಯಿ ಗಳಿಸುವ ಲೆಕ್ಕ

ಪ್ರತಿ ತಿಂಗಳು ಕೇವಲ 5000 ರೂ invest ಮಾಡಿ 50 ರಿಂದ 75 ಲಕ್ಷ ರೂಪಾಯಿ ಗಳಿಸುವ ಲೆಕ್ಕ ಹೇಗೆ ಎಂದು ಇಲ್ಲಿ ತಿಳಿಯೋಣ. ಮ್ಯೂಚುಯಲ್ ಫಂಡ್‌ಗಳು ವ್ಯವಸ್ಥಿತ ಹೂಡಿಕೆ ಯೋಜನೆ (SIP) ಎಂಬ ಉಪಯುಕ್ತ ಸಾಧನವನ್ನು ಹೊಂದಿವೆ.

ವ್ಯವಸ್ಥಿತ ಹೂಡಿಕೆ ಯೋಜನೆಯು (SIP) ಹೂಡಿಕೆದಾರರಿಗೆ ಅನೇಕ ಮ್ಯೂಚುಯಲ್ ಫಂಡ್‌ಗಳು ನೀಡುವ ಸಾಧನವಾಗಿದೆ. ಇದು ಒಂದು ಬಾರಿಯ ಮೊತ್ತದ ಬದಲಿಗೆ ನಿಯತಕಾಲಿಕವಾಗಿ ಸಣ್ಣ ಮೊತ್ತವನ್ನು ಇನ್ವೆಸ್ಟ್ ಮಾಡಲು ಅನುವು ಮಾಡಿಕೊಡುತ್ತದೆ. ಅಂದರೆ ನೀವು ಪ್ರತಿ ತಿಂಗಳು ಒಂದು ನಿರ್ದಿಷ್ಟ ಹಣವನ್ನು ಸುಲಭವಾಗಿ ಮ್ಯೂಚುಯಲ್ ಫಂಡ್ ಗಳಲ್ಲಿ ಇನ್ವೆಸ್ಟ್ ಮಾಡಬಹುದು.

ಮ್ಯೂಚುಯಲ್ ಫಂಡ್ ಗಳ ಲಾಭ ವರ್ಷಕ್ಕೆ 12% ದಿಂದ ಹಿಡಿದು 48% ವರೆಗೂ ಕೂಡ ಇದೆ. ಇದು ಹೂಡಿಕೆದಾರನ ಜ್ಞಾನ, ನಷ್ಟ ಸಹಿಸಿಕೊಳ್ಳುವ ಶಕ್ತಿಯ ಮೇಲೆ ನಿಂತಿದೆ. ಆರ್ಥಿಕ ಪಂಡಿತರ ಪ್ರಕಾರ ನಾವು 12% ಇಂದ 15% ಲಾಭವನ್ನು ಸುರಕ್ಷಿತವಾಗಿ ಪಡೆಯಬಹುದು.

ಈಗ ನಾವು ತಿಂಗಳಿಗೆ 5000 ರೂಪಾಯಿಯಂತೆ ಇನ್ವೆಸ್ಟ್ ಮಾಡುವ SIP ಆಯ್ದುಕೊಂಡರೆ ವರ್ಷಕ್ಕೆ 12% ನಂತೆ 20 ವರ್ಷಗಳ ಕೊನೆಗೆ ನಮ್ಮ ಹಣ ಎಷ್ಟಾಗುತ್ತದೆಂದು ಸಿಪ್ ಕ್ಯಾಲ್ಕುಲೇಟರ್ ಮೂಲಕ ಲೆಕ್ಕ ಹಾಕೋಣ.

ಮ್ಯೂಚುಯಲ್ ಫಂಡ್ ಹೂಡಿಕೆ ರಿಟರ್ನ್ಸ್ ಕ್ಯಾಲ್ಕುಲೇಟರ್
ಮ್ಯೂಚುಯಲ್ ಫಂಡ್ ರಿಟರ್ನ್ಸ್ ಕ್ಯಾಲ್ಕುಲೇಟರ್

ಮೇಲೆ ತೋರಿಸಿದಂತೆ ತಿಂಗಳಿಗೆ 5000 ರೂ ದಂತೆ ನಾವು 20 ವರ್ಷಗಳ ಕಾಲ SIP ಮಾಡಿದರೆ ನಾವು ಒಟ್ಟು 12 ಲಕ್ಷ ರೂಪಾಯಿ ಇನ್ವೆಸ್ಟ್ ಮಾಡಿದಂತೆ ಆಗುತ್ತದೆ. ವರ್ಷಕ್ಕೆ 12% ಬಡ್ಡಿ ನಮಗೆ 20 ವರ್ಷದ ಕೊನೆಗೆ 37,95,740 ರೂಪಾಯಿ ಲಾಭವನ್ನು ತಂದುಕೊಡುತ್ತದೆ. 20 ವರ್ಷದ ಕೊನೆಗೆ ನಮ್ಮ 12 ಲಕ್ಷ ಇನ್ವೆಸ್ಟ್ಮೆಂಟ್ ಜೊತೆ ಸೇರಿ ನಮಗೆ ಒಟ್ಟು 49,95,740 ರೂಪಾಯಿ ಹಣ ದೊರೆಯುತ್ತದೆ.

ಇದನ್ನು ಓದಿ:
1. ಆಳ್ವಾಸ್ ಶಾಲೆಯಿಂದ 2024-25ನೇ ಸಾಲಿನ ಉಚಿತ ಶಿಕ್ಷಣ(Free Education) ಪ್ರವೇಶಕ್ಕೆ ಅರ್ಜಿ ಆಹ್ವಾನ: ಇಲ್ಲಿದೆ ಸಂಪೂರ್ಣ ಮಾಹಿತಿ
2. Vote ಮಾಡಿ: ಬಿಗ್ ಬಾಸ್ ಕನ್ನಡ-10ರ ವಿಜೇತ ಯಾರಾಗಬೇಕು?

ಇದೆ ರೀತಿ ಹೂಡಿಕೆಯ ಮೇಲಿನ ಪ್ರತಿಫಲ ವರ್ಷಕ್ಕೆ 15% ಎಂದು ಲೆಕ್ಕ ಹಾಕಿದರೆ, 20 ವರ್ಷದ ಕೊನೆಗೆ ನಮ್ಮ 12 ಲಕ್ಷ ಇನ್ವೆಸ್ಟ್ಮೆಂಟ್ ಜೊತೆ ಸೇರಿ ನಮಗೆ ಒಟ್ಟು 75,79,775 ರೂಪಾಯಿ ಹಣ ದೊರೆಯುತ್ತದೆ. ಆಯ್ತಲ್ಲ 75 ಲಕ್ಷ!

ಮ್ಯೂಚುವಲ್ ಫಂಡ್‌ ಹೂಡಿಕೆ 
5000 ರೂ ಇನ್ವೆಸ್ಟ್ಮೆಂಟ್ ಮಾಡಿದ್ರೆ ಸಿಗಲಿದೆ ಬರೋಬ್ಬರಿ 50 ರಿಂದ 75 ಲಕ್ಷ ರೂ

ಇದು ಒಂದು ಕೇವಲ ಮಾಹಿತಿಗಾಗಿ ತೋರಿಸಿದ ಲೆಕ್ಕ ಇರುತ್ತದೆ. ಮ್ಯೂಚುಯಲ್ ಫಂಡ್ ಹೂಡಿಕೆ ಆರ್ಥಿಕ ಅಪಾಯಗಳನ್ನು ಒಳಗೊಂಡಿರುತ್ತವೆ. ನಿಮ್ಮ ರಿಟರ್ನ್ ಆನ್ ಇನ್ವೆಸ್ಟ್ಮೆಂಟ್ ಅನೇಕ ಮಾರುಕಟ್ಟೆ ಆನಿಶ್ಚಿತತೆಗಳ ಮೇಲೆ ನಿಂತಿದೆ. ಆದರೂ ಕೂಡ ಇದು ಸಾಧ್ಯ ಎಂದು ಹೇಳುವುದು ಈ ಲೇಖನದ ಉದ್ದೇಶ.

ಮ್ಯೂಚುಯಲ್ ಫಂಡ್ ನಲ್ಲಿ ಇನ್ವೆಸ್ಟ್ ಮಾಡುವ ಇನ್ನೊಂದು ಲಾಭ ಅಂದರೆ ನೀವು ಯಾವಾಗ ಬೇಕಾದರು ನಿಮ್ಮ ಹಣವನ್ನು ವಾಪಾಸ್ ಪಡೆಯಬಹುದು. ಇಲ್ಲಿ ಯಾವುದೇ ಲಾಕ್ ಇನ್ ಅವಧಿ ಇರುವುದಿಲ್ಲ.

ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ಹೇಗೆ?

ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲವೂ ನಮ್ಮ ಬೆರಳ ತುದಿಯಲ್ಲಿದೆ. ಮ್ಯೂಚುಯಲ್ ಫಂಡ್ ನಲ್ಲಿ ಇನ್ವೆಸ್ಟ್ ಮಾಡುವುದು ಹಿಂದೆಂದಿಗಿಂತಲೂ ಸುಲಭವಾಗಿದೆ. ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಅಕೌಂಟ್ ಇದ್ದರೆ ನೀವು ಸುಲಭವಾಗಿ ಮ್ಯೂಚುಯಲ್ ಫಂಡ್ ನಲ್ಲಿ ಇನ್ವೆಸ್ಟ್ ಮಾಡಬಹುದು.

ನೀವು ನಿಮ್ಮ ಅಕೌಂಟ್ ಇರುವ ಬ್ಯಾಂಕ್ ನಿಂದ ಮ್ಯೂಚುಯಲ್ ಫಂಡ್ ನಲ್ಲಿ ಇನ್ವೆಸ್ಟ್ ಮಾಡಬಹುದು. ಇಲ್ಲವೇ ಹೂಡಿಕೆಗೆ ಅಂತಲೆ ಇರುವ ಪೋರ್ಟಲ್ ಗಳಾದ Groww, Zerodha ಹೀಗೆ ಯಾವುದಾದರು ಒಂದು ಕಡೆ ನೀವು ಅಕೌಂಟ್ ಓಪನ್ ಮಾಡಬಹುದು.

ಇದನ್ನು ಓದಿ:
1. ಮ್ಯೂಚುವಲ್ ಫಂಡ್‌ಗಳು: ಒಂದು ಸಮಗ್ರ ಮಾರ್ಗದರ್ಶಿ (Complete Free Guide 2024)
2. ಮ್ಯೂಚುವಲ್ ಫಂಡ್ ಪದಗಳು: ಹೂಡಿಕೆ ಮಾಡುವ ಮೊದಲು ನೀವು ತಿಳಿದಿರಬೇಕಾದ 11 ಪದಗಳು

ನಿಮಗೆ ಮ್ಯೂಚುಯಲ್ ಫಂಡ್ ಗಳ ಬಗ್ಗೆ ಹೆಚ್ಚಿನ ಪ್ರಶ್ನೆ ಇದ್ದಲ್ಲಿ ಕೆಳಗೆ ಕಮೆಂಟ್ ಮೂಲಕ ತಿಳಿಸಿ. ಕನ್ನಡ ಭಾಷೆಯಲ್ಲಿ ಉತ್ತಮ ಹಣಕಾಸಿನ ಮಾಹಿತಿಯನ್ನು ನೀಡುವುದು ನಮ್ಮ ಉದ್ದೇಶ. ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ನಾವು ಉತ್ಸುಕರಾಗಿದ್ದೇವೆ.

Frequently Asked Questions

Can I invest 500 rs per month in mutual funds?

Yes, you can invest 500 rs per month in mutual funds. According to SEBI rule minimum investment value of Rs. 100 for lump-sum deposits and Rs. 500 for Systematic Investment Plans (SIPs).

Mutual Fund industry in India is regulated by whom?

Mutual Fund industry in India is regulated by SEBI(Securities and Exchange Board of India)

What is IDCW in mutual funds?

IDCW in Mutual Funds is Income Distribution cum Capital Withdrawal. IDCW is an investment plan offered by mutual funds. With IDCW, investors receive regular income from their investments.

ಇದನ್ನು ಓದಿ:
1. ಆಳ್ವಾಸ್ ಶಾಲೆಯಿಂದ 2024-25ನೇ ಸಾಲಿನ ಉಚಿತ ಶಿಕ್ಷಣ(Free Education) ಪ್ರವೇಶಕ್ಕೆ ಅರ್ಜಿ ಆಹ್ವಾನ: ಇಲ್ಲಿದೆ ಸಂಪೂರ್ಣ ಮಾಹಿತಿ
2. Vote ಮಾಡಿ: ಬಿಗ್ ಬಾಸ್ ಕನ್ನಡ-10ರ ವಿಜೇತ ಯಾರಾಗಬೇಕು?
News Desk
News Desk
24newsexpress.in News desk comprise of 2 journalism graduates working under the guidance of Chief Editor.

Related Articles

LEAVE A REPLY

Please enter your comment!
Please enter your name here

Stay Connected

112FansLike
130FollowersFollow
49FollowersFollow

Latest Articles