ಕಂದಾಯ ಇಲಾಖೆ ನೌಕರ ಆತ್ಮಹತ್ಯೆ; ಡೆತ್ ನೋಟ್ ಪತ್ತೆ

0
ಕಂದಾಯ ಇಲಾಖೆ ನೌಕರ ಆತ್ಮಹತ್ಯೆ

ಚಿತ್ರದುರ್ಗ, ಡಿಸೆಂಬರ್ 17: ಕಂದಾಯ ಇಲಾಖೆ ನೌಕರನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಳ್ಳಕೆರೆ ನಗರದಲ್ಲಿ ಭಾನುವಾರ ನಡೆದಿದೆ.

ಚಳ್ಳಕೆರೆ ತಾಲ್ಲೂಕು ಕಚೇರಿಯಲ್ಲಿ ಚುನಾವಣಾ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸಿ.ಎಂ.ಗುರುಲಿಂಗಣ್ಣ (52) ಅವರು ವಾಲ್ಮೀಕಿ ನಗರದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತಃ ಚಿತ್ರದುರ್ಗ ತಾಲ್ಲೂಕಿನ ದೊಡ್ಡಘಟ್ಟ ಗ್ರಾಮದವರಾದ ಗುರು ಲಿಂಗಣ್ಣ ಅವರು ಕಳೆದ 32 ವರ್ಷಗಳಿಂದ ಇದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ನಿಜಕ್ಕೂ ತುಂಬಾ ದುರಂತದ ಸಂಗತಿ..ಇಂದು ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಪರಿಸ್ಥಿತಿ ತುಂಬಾ ಒತ್ತಡದಲ್ಲಿ ಇದೆ..ಇದೆ ರೀತಿ ಒತ್ತಡ ಮುಂದುವರೆದರೆ ಇನ್ನೆಷ್ಟು ಜೀವಗಳು ಬಲಿಯಾಗುತ್ತವೆಯೋ.

-ತನ್ನ ಹೆಸರನ್ನು ಬಹಿರಂಗಪಡಿಸಲು ಇಷ್ಟಪಡದ ಒಬ್ಬ ಅಧಿಕಾರಿ

ಮರಣ ಪತ್ರ. Source: News 18 Kannada

ಗ್ರಾಮ ಲೆಕ್ಕಿಗರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ತಾಲ್ಲೂಕು ಕಚೇರಿ ಭೂಮಿ ಕೇಂದ್ರದಲ್ಲಿ ಕೆಲಸ ಮಾಡಿದರು ಮತ್ತು ನಂತರ ಪ್ರಥಮ ದರ್ಜೆ ಸಹಾಯಕರಾಗಿ ಬಡ್ತಿ ಪಡೆದರು. ಅವರನ್ನು ಚುನಾವಣಾ ಶಾಖೆಗೆ ನಿಯೋಜಿಸಲಾಯಿತು.

ಪತ್ನಿ ವಿಜಯಕಲಾ ಅವರು ತಾಲ್ಲೂಕಿನ ತಿಮ್ಮಪ್ಪಯ್ಯ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಭಾವನಾ ಮತ್ತು ಮಾನ್ಯ ಎಂಬ ಪುತ್ರಿಯರಿದ್ದಾರೆ. ಸ್ಥಳಕ್ಕೆ ಪಿಎಸ್ಐ ಶಿವರಾಜ್, ಕಸಬಾ ಕಂದಾಯ ನಿರೀಕ್ಷಕ ಲಿಂಗೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಇದನ್ನು ಓದಿ: ರಶ್ಮಿಕಾ ಮಂದಣ್ಣ: ಎ ಸ್ಟಾರ್ ಆನ್ ದಿ ರೈಸ್

Source Credit: ಕಂದಾಯ ಇಲಾಖೆ ನೌಕರ ಆತ್ಮಹತ್ಯೆ; ಡೆತ್ ನೋಟ್ ಪತ್ತೆ

LEAVE A REPLY

Please enter your comment!
Please enter your name here