31 C
Bengaluru
Friday, February 21, 2025

ಆಳ್ವಾಸ್ ಶಾಲೆಯಿಂದ 2024-25ನೇ ಸಾಲಿನ  ಉಚಿತ ಶಿಕ್ಷಣ(Free Education) ಪ್ರವೇಶಕ್ಕೆ ಅರ್ಜಿ ಆಹ್ವಾನ: ಇಲ್ಲಿದೆ ಸಂಪೂರ್ಣ ಮಾಹಿತಿ

ಆಳ್ವಾಸ್ ಕನ್ನಡ ಮಾಧ್ಯಮದಲ್ಲಿ (Alva’s Kannada Medium ) ಕಲಿಯ ಬಯಸುವ ವಿದ್ಯಾರ್ಥಿಗಳಿಗೆ ಒಂದು ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು, ಈ ಶಾಲೆಯಲ್ಲಿ ಕಲಿಯ ಬಯಸುವ ವಿದ್ಯಾರ್ಥಿಗಳು ಸಂಪೂರ್ಣ ಉಚಿತ ಶಿಕ್ಷಣ(Free Education) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಈ ಒಂದು ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಬಹುದು. ಈ ಒಂದು ಅವಕಾಶದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಇದನ್ನು ನೋಡಿ: ರಶ್ಮಿಕಾ ಮಂದಣ್ಣ: ಎ ಸ್ಟಾರ್ ಆನ್ ದಿ ರೈಸ್

ಇದೇ ರೀತಿಯ ವಿವಿಧ ಪ್ರಯೋಜನಕಾರಿ ಮಾಹಿತಿ ತಿಳಿಯಲು ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಆಳ್ವಾಸ್ ಶಾಲೆಯಲ್ಲಿ ಉಚಿತ ಶಿಕ್ಷಣ ಅವಕಾಶ:

ಆಳ್ವಾಸ್ ಶಾಲೆ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 1995 ರಲ್ಲಿ “ಉತ್ತಮ ನಾಳೆಯನ್ನು ರೂಪಿಸುವುದು” ಎಂಬ ಧ್ಯೇಯ ವಾಕ್ಯದೊಂದಿಗೆ ಸ್ಥಾಪನೆಯಾಯಿತು. ಅಲ್ಲಿಂದ ಇಲ್ಲಿಯವರೆಗೆ ಉತ್ಕೃಷ್ಟ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸುವಲ್ಲಿ ಅದು ಯಶಸ್ವಿಯಾಗಿದೆ.

ಇಂದು ಎಲ್ಲರೂ ಕೂಡ ತಮ್ಮ ಮಕ್ಕಳನ್ನು ಬಹಳ ಕಷ್ಟ ಪಟ್ಟು ಹಣ ಕೂಡಿಸಿ ಒಳ್ಳೆಯ ಶಾಲೆಗಳಲ್ಲಿ ಓದಿಸಲು ಬಯಸುತ್ತಾರೆ. ಆದರೆ ಕೆಲವರಿಗೆ ಅಷ್ಟು ಹಣ ಕೊಟ್ಟು ತಮ್ಮ ಮಕ್ಕಳನ್ನು ಓದಿಸಲು ಆಗುತ್ತಿರುವುದಿಲ್ಲ. ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ(Alva’s Kannada Medium School) 2024-25 ರ ಶೈಕ್ಷಣಿಕ ವರ್ಷದ ಸಂಪೂರ್ಣ ಉಚಿತ ಶಿಕ್ಷಣ ಸೌಲಭ್ಯವನ್ನು ನೀಡಲು ಪ್ರಾರಂಭಿಸಿದೆ. ಅದಕ್ಕಾಗಿ ಈ ಒಂದು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಮಕ್ಕಳಿಗೆ ಉಚಿತ ಶಿಕ್ಷಣಕ್ಕಾಗಿ 6 ರಿಂದ 9ನೇ ತರಗತಿಗಳಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹಾಗಾಗಿ ಮಕ್ಕಳು ಇದೀಗ ಆದಷ್ಟು ಬೇಗ ಅರ್ಜಿ ಸಲ್ಲಿಸಿ ಈ ಒಂದು ಉಚಿತ ಶಿಕ್ಷಣವನ್ನು ಪಡೆಯಬಹುದು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ  ಉಚಿತ ಶಿಕ್ಷಣ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ.

ಅರ್ಜಿ ಭರ್ತಿ ಮಾಡಲು ಬೇಕಾದ ವಿವರಗಳು:

1. ಪ್ರಸ್ತುತ 6, 7, 8, ಮತ್ತು 9ನೇ ತರಗತಿಗಳಿಗೆ ವಿದ್ಯಾರ್ಥಿ ಪ್ರವೇಶಾತಿ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿಯನ್ನು ಕಡ್ಡಾಯವಾಗಿ ಮತ್ತು ಪೂರ್ಣವಾಗಿ ಭರ್ತಿ ಮಾಡುವುದು, ಅರ್ಜಿ ಇಲ್ಲದೆ ನೇರವಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಯಾರಿಗೂ ಅವಕಾಶ ನೀಡಲಾಗುವುದಿಲ್ಲ.
2. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ವಿದ್ಯಾರ್ಥಿಯ ಎಸ್.ಎ.ಟಿ.ಎಸ್ (ಶಾಲಾ ಮುಖ್ಯಸ್ಥರಿಂದ ಖಚಿತಪಡಿಸಿಕೊಂಡು) ಹಾಗೂ ಆಧಾರ್ ಸಂಖ್ಯೆಯನ್ನು ನಮೂದಿಸುವುದು, ಅರ್ಜಿಯೊಂದಿಗೆ ವಿದ್ಯಾರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ನಿಗದಿತ ಸ್ಥಳದಲ್ಲಿ JPEG ಮಾದರಿಯಲ್ಲಿ ಲಗತ್ತಿಸುವುದು. ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಅಥವಾ ಇನ್ನಿತರ ಶಾಲೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಕಳುಹಿಸಬೇಕಿಲ್ಲ.
3. ಒಂದೇ ವಿದ್ಯಾರ್ಥಿಯು ಪದೇ ಪದೇ ಅರ್ಜಿ ಹಾಕಲು / ಅರ್ಜಿಯಲ್ಲಿ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ.
4. ಕ್ರೀಡಾ / ಸಾಂಸ್ಕೃತಿಕ ವಿಭಾಗದಲ್ಲಿ ಆಯ್ಕೆ ಬಯಸುವ ವಿದ್ಯಾರ್ಥಿಗಳು ಜಿಲ್ಲಾ ರಾಜ್ಯ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿರಬೇಕು. ಸಂಬಂಧಪಟ್ಟ ಪ್ರಮಾಣ ಪತ್ರಗಳ ನಕಲು ಪ್ರತಿಯನ್ನು ಪತ್ರಿಕೆ ಪ್ರಕಟಣೆ ನೀಡಿದ ಬಳಿಕ ಪ್ರತ್ಯೇಕ ಅರ್ಜಿ ಸಲ್ಲಿಸುವುದು.ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಡಿ.
5. ಪ್ರಸ್ತುತ ವಿದ್ಯಾರ್ಥಿಗಳು ಯಾವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೋ, ಅದರ ಮುಂದಿನ ತರಗತಿಗೆ ಆಯ್ಕೆ ಬಯಸುವುದರಿಂದ ಪ್ರಸ್ತುತ ಓದುತ್ತಿರುವ ಎಲ್ಲಾ ವಿಷಯಗಳಲ್ಲಿ ಹಾಗೂ ಮಾನಸಿಕ ಸಾಮರ್ಥ್ಯ ವಿಷಯಗಳನ್ನು ಅಧ್ಯಯನ ಮಾಡಬೇಕು.
6. 6 ಮತ್ತು 7ನೇ ತರಗತಿಗೆ 120 ಅಂಕಗಳ ಹಾಗೂ 8 ಮತ್ತು 9ನೇ ತರಗತಿಗೆ 150 ಅಂಕಗಳ ಆಧಾರದಲ್ಲಿ ಚಟುವಟಿಕೆಗಳು ಇರುತ್ತದೆ.
7. ಅರ್ಜಿಯನ್ನು ಪೂರ್ಣವಾಗಿ Onlineನಲ್ಲಿ ಭರ್ತಿ ಮಾಡಿ Submit ಆದ ಬಳಿಕ ಎರಡು ಪ್ರತಿಯನ್ನು ಪ್ರಿಂಟ್ ಮಾಡಿಕೊಳ್ಳುವುದು. ನಂತರದಲ್ಲಿ ಒಂದು ಪ್ರತಿ ಅರ್ಜಿಯನ್ನು ಸಂಸ್ಥೆಯ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸುವುದು ಒಂದು ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳುವುದು.
8. ಯಾವ ಕಾರಣಕ್ಕೂ ಕೈ ಬರಹದ ಅರ್ಜಿ ಸ್ವೀಕರಿಸಲಾಗುವುದಿಲ್ಲ.
9. ಮೊದಲ ಹಂತದ ಆಯ್ಕೆ ಪ್ರಕ್ರಿಯೆಯು ಓ. ಎಮ್. ಆರ್ ಮಾದರಿಯಲ್ಲಿ ಇರಲಿದ್ದು, ಎರಡನೇ ಹಂತಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬರವಣಿಗೆ ಆಧಾರಿತ ಚಟುವಟಿಕೆಯನ್ನು ನಡೆಸಲಾಗಿ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.
10. ಮರುದಿನ ನೇರ ಸಂದರ್ಶನದಲ್ಲಿ ಭಾಗವಹಿಸಿ ದಾಖಲಾತಿ ಮಾಡಿಕೊಳ್ಳುವುದು.
11. ಆಯ್ಕೆ ಪ್ರಕ್ರಿಯೆಯು ದಿನಾಂಕ 03-03-2024 ರ ಆದಿತ್ಯವಾರದಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ.
12. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಆನ್ಲೈನ್ನಿಂದ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿ 8.00 ಗಂಟೆಗೆ ಸರಿಯಾಗಿ ಹಾಜರಾಗುವುದು. ಪ್ರವೇಶ ಪತ್ರ ಇಲ್ಲದೆ ಬಂದವರನ್ನು ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುವುದಿಲ್ಲ.
13. ಪೆನ್ನು, ಪೆನ್ಸಿಲ್, ರಬ್ಬರ್, ಸ್ಕೇಲ್ ಬಿಟ್ಟು ಬೇರೆ ಯಾವುದೇ ಅಗತ್ಯ ಪರಿಕರಗಳು ಬೇಕಿಲ್ಲ. ಯಾವುದೇ ಫೋಟೋ, ಆಧಾರ್ ಕಾರ್ಡ್ ಇನ್ನಿತರ ದಾಖಲೆಗಳು ಬೇಕಿಲ್ಲ.
14. *ಬಿಳಿದ್ರಾವಣ(Whitener) ಉಪಯೋಗಿಸುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
15. ಪ್ರವೇಶ ಪತ್ರವನ್ನು ದಿನಾಂಕ 15-02-2024 ರಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾದರೆ ಆಧಾರ್ ಕಾರ್ಡ್ ಮತ್ತು SATS ಸಂಖ್ಯೆ ಮುಖ್ಯವಾಗಿರುತ್ತದೆ ಅದರ ಆಧಾರದಲ್ಲಿ ಪ್ರವೇಶಪತ್ರ ಡೌನ್ಲೋಡ್ ಮಾಡಿಕೊಳ್ಳುವುದು.

ಆಳ್ವಾಸ್ ಶಾಲೆ ಉಚಿತ ಶಿಕ್ಷಣ ಪ್ರವೇಶಕ್ಕೆ ಅರ್ಜಿ: ವೆಬ್ ಸೈಟ್ ವಿವರ

ಈ ಒಂದು ಉಚಿತ ಶಿಕ್ಷಣ ಪಡೆಯಲು ಆಸಕ್ತ ವಿದ್ಯಾರ್ಥಿಗಳು ಈ ಕೆಳಗೆ ನೀಡಿದ ವೆಬ್ ಸೈಟ್ ಗೆ ಭೇಟಿ ನೀಡಬೇಕು. ವೆಬ್ ಸೈಟ್ ಲಿಂಕ್: https://scholarship.alvas.org/login.html

ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದುಕೊಂಡು ಒಂದು ಪ್ರತಿಯನ್ನು ಕೆಳಗಿನ ವಿಳಾಸಕ್ಕೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು.

ಅರ್ಜಿ ಪ್ರತಿ ಸಲ್ಲಿಸಬೇಕಾದ ವಿಳಾಸ : ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ), ಮೂಡುಬಿದಿರೆ, ದಕ್ಷಿಣ ಕನ್ನಡ -574227.

ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ದೂರವಾಣಿ ಮೂಲಕ ಸಂಪರ್ಕಿಸಬಹುದು: (ಸಮಯ 9.00am-5:00pm-7026530137 / 7026530263)

News Desk
News Desk
24newsexpress.in News desk comprise of 2 journalism graduates working under the guidance of Chief Editor.

Related Articles

LEAVE A REPLY

Please enter your comment!
Please enter your name here

Stay Connected

112FansLike
130FollowersFollow
49FollowersFollow

Latest Articles